ಕರೋನ ಪ್ರಭಾವ
ಬಾಯಿಗೆ
ಬಟ್ಟೆಬಂದಿತು
ಮಾಸ್ಕ್ ಫ್ಯಾಷನ್ ಆಯಿತು
ಸೋಪು
ಸ್ಯಾನಿಟೈಝೆರ್ ಅವಶ್ಯವಾಯಿತು
ಎಲ್ಲವನ್ನು
ಸದಾ ತೊಳೆಯುವುದಾಯಿತು
ಹೌಸ್
ಪದೇ ಪದೇ ಶುಚಿ ಮಾಡಿದ್ದಾಯಿತು
ಎಷ್ಟು
ತಿಕ್ಕಿದರು ಸಮಾಧಾನ ಇಲ್ಲವಾಯಿತು
ರೋಡ್
ಖಾಲಿಯಾಯಿತು
ಕದಲಿದರೆ
ರಾಡ್ ತಗುಲಿತು
ಅಂಗಡಿಗಳು
ಮುಚ್ಚಿಹೋಯಿತು
ಶಾಪಿಂಗ್
ಬೇಡವಾಯಿತು
ಮಾಲ್ಸ್ ಪಬ್ ಗಳಿಗೆ ಹೋಗದಂತಾಯಿತು
ಯಾವ
ವಾರವೆಂದು ಮರೆತುಹೋಯಿತು
ಮೂರು ಹೊತ್ತು ಊಟವಾಯಿತು
ಕುಕಿಂಗ್
ಹೊಸ ಪ್ಯಾಶನ್ ಆಯಿತು
ಪಾಠಗಳು
ಇಲ್ಲವಾಯಿತು
ಆಟಗಳು
ನಿಂತುಹೋಯಿತು
ಗುಡಿಗಳು ಮುಚ್ಚಾಯಿತು
ದೇವರಿಗೆ
ರಜೆಯಾಯಿತು
ಸಿನಿಮಾಗಳು
ಹಳೆಯದಾಯಿತು
ಸೀರಿಯಲ್ಗಳು
ಸಣ್ಣದಾಯಿತು
ವಾರ್ತೆಗಳು
ಕರೋನದಾಯಿತು
ಕೇಳುತ್ತಿದ್ದರೆ
ಭಯವಾಯಿತು
ದಾವಾಖಾನಗಳಿಗೆ
ಕ್ಯೂಆಯಿತು
ಆಸ್ಪತ್ರೆಗಳು
ತುಂಬಿಹೋಯಿತು
ಪೊಲೀಸ್ರಿಗೆ
ಬಂದೋಬಸ್ತ್ ಆಯಿತು
ಡಾಕ್ಟರ್ಸ್ಗೆ
ವರ್ಕ್ಲೋಡ್ ಹೆಚ್ಚಾಯಿತು
ಆಫೀಸಿಗೆ
ರಜೆಯಾಯಿತು
ಸಂಬಳ
ಅರ್ಧವಾಯಿತು
ಸೋಫಾ
ವರ್ಕ್ ಸ್ಟೇಷನ್ ಆಯಿತು
ವರ್ಕ್
ಫ್ರಮ್ ಹೋಂ ಕಾಮನ್ ಆಯಿತು
ಫ ನ್ಕ್ಷನ್ಸ್ ಇಲ್ಲವಾಯಿತು
ಮ್ಯಾರೇಜ್ಗೆ
ಹೋಗಲಾರದಾಯಿತು
ಶುಭಾಶಯಗಳು
ಇಲ್ಲವಾಯಿತು
ಮನಸೆಲ್ಲಾ
ಭಾರವಾಯಿತು
ಶೇವಿಂಗ್
ಜಾಸ್ತಿಯಾಯಿತು
ಹೇರ್
ಕಟಿಂಗ್ ಹವ್ಯಾಸವಾಯಿತು
ಲಕ್ಸುರಿ
ವಸ್ತುಗಳ ಆಸೆ ಹೋಯಿತು
ಮನೆಬಟ್ಟೆಗಳೇ ಕಂಫರ್ಟ್ ಆಯಿತು
ಓಲ್ಡ್
ಫ್ರೆಂಡ್ಸ್ ಗಳ ನೆನಪಾಯಿತು
ಫ್ಯಾಮಿಲಿ ನಮಗೆ
ಹತ್ತಿರವಾಯಿತು
ಜನರಬಳಿ
ಹೋಗೋದು ನಿಂತೊಯ್ತು
ವಿಡಿಯೋ
ಕಾನ್ಫರೆನ್ಸಿಂಗ್ ಗತಿಯಾಯಿತು
ಕರೆಂಟ್,
ವೈಫೈ ಮುಖ್ಯವಾಯಿತು
ಮೊಬೈಲ್
ಫೋನ್ ಅಡ್ಡಿಕ್ಷನ್ ಆಯಿತು
ಜಿಮ್ಮಿಂಗ್,
ಡ್ರೈವಿಂಗ್ ಮರೆತೊಯ್ತು
ಬೋರ್ಡ್
ಗೇಮ್ಸ್, ಟಿಕ್ ಟಾಕ್ ಹೆಲ್ಪ್ಆಯ್ತು
ಪಬ್ಲಿಕ್
ಟ್ರಾನ್ಸ್ಪೋರ್ಟ್ ಇಲ್ಲದಾಯಿತು
ನಡೆಯೋದೆ
ವಾಸಿ ಎಂದೆನಿಸಿತು
'ಟ್ರಾವೆಲ್ಲಿಂಗ್
ಅರೌಂಡ್ ದಿ ವರ್ಲ್ಡ್' ಹೋಯಿತು
'ವಾಕಿಂಗ್
ಅರೌಂಡ್ ದಿ ಹೌಸ್' ಬಂದಾಯ್ತು
ಬೇಸಿಗೆ
ಶುರುವಾಯಿತು
ಬೆವರು
ನಿಲ್ಲದಾಯಿತು
ನಿದ್ರೆ
ಬಾರದಾಯಿತು
ಟೈಂಪಾಸ್
ಆಗದಾಯಿತು
ಕ್ಯಾಲೋರಿಸ್
ಹೆಚ್ಚಾಯಿತು
ಆಸೆ
ನಿಲ್ಲದಾಯಿತು
ಸೇವಿಂಗ್ಸ್
ಕಮ್ಮಿಯಾಯಿತು
ಕೆಲಸ
ದೊರೆಯದಾಯಿತು
ಕನಸುಗಳು
ಚದರಿಹೋಯಿತು
ಮುಂದೇನು
ತಿಳಿಯದಾಯಿತು.

Super lines... Awesome
ReplyDelete