ಸದಾ ಫ್ಯಾಷನ್ನಲ್ಲಿರುವ ಜೀನ್ಸ್...

ವಿಶ್ವದೆಲ್ಲೆಡೆ ಸ್ತ್ರೀಪುರುಷರ ಭೇದವಿಲ್ಲದೆ ಎಲ್ಲ ವಯಸ್ಸಿನವರು, ಎಲ್ಲ ವರ್ಗದವರು ಇಷ್ಟಪಡುವ ಏಕೈಕ ಉಡುಪು ಜೀನ್ಸ್. ಜೀನ್ಸ್ ಫ್ಯಾಷನೆಬಲ್, ಕಂಫರ್ಟ್, ಕಡಿಮೆ ನಿರ್ವಹಣೆ ಹಾಗು ಧರಿಸಿದರೆ ಹೆಚ್ಚು ಆಕರ್ಷಕ ಎಂದು ಎಲ್ಲರು ಹೇಳುವ ವಿಷಯವೇ. ಗ್ರಾಹಕರ ಆಸೆಗಳಿಗೆ ತಕ್ಕಂತೆ ಹಲವು ಕಂಪೆನಿಗಳು ಬಗೆಬಗೆಯ ಬಣ್ಣಗಳಲ್ಲಿ, ಬಗೆಬಗೆಯ ವಿನ್ಯಾಸಗಳಲ್ಲಿ, ಬೇರೆ ಬೇರೆ ವಯೋಮಾನದವರಿಗೆ ಹೊಂದುವಂತ ಜೀನ್ಸ್ ಪ್ಯಾಂಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಅಮೆರಿಕಾದ ಕಾರ್ಮಿಕ ವರ್ಗದವರ ಹೆಚ್ಚು ಬಾಳಿಕೆಯ ಬಟ್ಟೆಯ ಬೇಡಿಕೆಯನ್ನು ಈಡೇರಿಸುವ ಉದ್ದೇಶದಿಂದ ಮಾರುಕಟ್ಟೆಗೆ ಬಂದ ಬ್ಲೂ ಜೀನ್ಸ್ ಇಂದು ವಿಶ್ವದೆಲ್ಲೆಡೆ ಎಲ್ಲರ ಮನವನ್ನು ಗೆದ್ದಿದೆ. ಅಷ್ಟೇ ಅಲ್ಲದೆ ಸ್ತ್ರೀ ಪುರುಷ ನಡುವಿನ ಅಸಮಾನತೆಯನ್ನು ಹೋಗಲಾಡಿಸುವುದರಲ್ಲಿ ಇದು ಒಂದು ಮುಖ್ಯ ಪಾತ್ರ ವಹಿಸಿದೆ ಎಂದು ನಾವು ಹೇಳಬಹುದು. ಯಾವ ವರ್ಗಕ್ಕೆ ಸೇರಲಿ, ಎಲ್ಲೇ ವಾಸಿಸಲಿ, ಜೀನ್ಸ್ ಧರಿಸಿದರೆ ನಾವು ಆಧುನಿಕ ಮನೋಭಾವ ಹೊಂದಿರುವವರು, ಸಮಾನರು ಎಂಬ ಭಾವ ಜನರಲ್ಲಿ ಮೂಡುತ್ತಿದೆ. 

'ಡೆನಿಮ್' ಎಂಬ ವಿಶಿಷ್ಟ ರೀತಿಯ ಉಣ್ಣೆಯಿಂದ ತಯಾರಾಗುವ ಈ ಬಟ್ಟೆ ಹೆಚ್ಚು ಕಾಲ ಬಾಳುವುದರ ಜೊತೆಗೆ, ಬೆವರು ಹೀರಿಕೊಳ್ಳುವ ಹಾಗು ಸೆಕೆಯಲ್ಲಿ ತಣ್ಣಗಿನ ಅನುಭವ ಕೊಡುವ ಗುಣಗಳನ್ನು ಹೊಂದಿದೆ. ವಿಶ್ವದ ಮಾರುಕಟ್ಟೆಯಲ್ಲಿ ಈಗ ಕಡಿಮೆ ಬೆಲೆಯ ಜೀನ್ಸ್ ಗಳಿಂದ ಹಿಡಿದು ಲಕ್ಷಾಂತರ ಬೆಲೆಬಾಳುವ ಜೀನ್ಸ್ ಉಡುಪುಗಳು ಲಭ್ಯವಿದೆ. ಇಂದು ಜೀನ್ಸ್ ಒಂದು 'ಫ್ಯಾಷನ್ ಸಿಂಬಲ್' ಆಗಿ ವಿಶ್ವದೆಲ್ಲೆಡೆ ಮನ್ನಣೆಯನ್ನು ಪಡೆದಿದೆ.  

Washes of Jeans

ವಿದ್ಯಾರ್ಥಿಗಳಿಂದ ಹಿಡಿದು ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವವರು, ವ್ಯಾಪಾರಿಗಳಿಂದ ಹಿಡಿದು ಗ್ರಿಹಿಣಿಯರವರೆಗೂ ಎಲ್ಲರಿಗು ಅಚ್ಚುಮೆಚ್ಚು ಈ ಜೀನ್ಸ್. ಜೀನ್ಸ್ ಧರಿಸುವುದು ಸುಲಭ. ಅದರ ನಿರ್ವಹಣೆ ಸುಲಭ. ಇಸ್ತ್ರಿ ಬೇಡ ಹಾಗು ಹೇಗಿದ್ದರೂ ನಡೆಯುತ್ತದೆ. ವಿವಿಧ ವಿನ್ಯಾಸದ ಮೇಲುಡುಗೆ ಧರಿಸಿದರೆ ಆಯಿತು. ಎರಡು ಮೂರು ದಿನ ಅದೇ ಪ್ಯಾಂಟು ಧರಿಸಿದರು ಯಾರು ಗಮನಿಸುವುದಿಲ್ಲ. ಅಲ್ಲದೆ ಜೀನ್ಸ್ ಧರಿಸಿದರೆ ಆಧುನಿಕರಂತೆ ಕಾಣುತ್ತಾರೆ. 

ಜೀನ್ಸ್ ಪ್ಯಾಂಟುಗಳಲ್ಲಿ ಅನೇಕ ಪಾಕೆಟ್ಸ್ ಗಳು ಇರುತ್ತವೆ. ನಮಗೆ ಹೊರ ಹೋಗಬೇಕಾದರೆ ವ್ಯಾಲೆಟ್, ಫೋನ್, ಕೀಸ್ ಎಲ್ಲವನ್ನು ಹಿಡಿದುಕೊಳ್ಳಬೇಕಾದಾಗ ಬ್ಯಾಗ್ ಅನಿವಾರ್ಯ ವಾಗುತ್ತದೆ. ಆದರೆ ಸ್ವತಂತ್ರವಾಗಿ ಓಡಾಡುವುದಕ್ಕೆ ಕೈಯಲ್ಲಿ ಬ್ಯಾಗ್ ಇದ್ರೆ ಕಿರಿಕಿರಿ. ಇಂತಹ ಸಮಯದಲ್ಲಿ ಜೀನ್ಸ್ ಪ್ಯಾಂಟ್ ಸಹಕಾರಿ. ಇದರ ಪ್ಯಾಕೆಟ್ ಗಳಲ್ಲಿ ಎಲ್ಲವನ್ನು ಇರಿಸಿಕೊಂಡು ಬರಿಗೈಯಲ್ಲಿ ಓಡಾಡಬಹುದು. ದಪ್ಪವಿರಲಿ ಅಥವ ತೆಳ್ಳಗಿರಲಿ ಎಲ್ಲರಿಗು ಹೊಂದುವ ಬಟ್ಟೆ ಇದು. 

ಗಣಿಗಳಲ್ಲಿ ದುಡಿಯುವ ಕಾರ್ಮಿಕರು, ದೊಡ್ಡ ದೊಡ್ಡ ಕಂಪೆನಿಗಳ ಮಾಲೀಕರು, ಸಿನೆಮಾ ನಟರು ಹೀಗೆ ಎಲ್ಲರು ಅತ್ಯಂತ ಸುಲಭವಾಗಿ ತನ್ನ ತೆಕ್ಕೆಯೊಳಗೆ ತೆಗೆದುಕೊಂಡ ಜೀನ್ಸ್ ಯಾರನ್ನು ಬಿಡುತ್ತಿಲ್ಲ. ಎಲ್ಲರೂ ಇಂದರ ದಾಸರಾಗುತ್ತಿದ್ದಾರೆ. ಪ್ಯಾಂಟ್, ಕೋಟ್, ಶೊರ್ಟ್ಸ್, ಶಾರ್ಟ್ಸ್ ಹೀಗೆ ಜೀನ್ಸ್ ಬಟ್ಟೆ ಆವರಿಸದ ಜಾಗವಿಲ್ಲ. ಸರ್ವಕಾಲೀನ ಉಡುಪು ಆಗಿರುವ ಜೀನ್ಸ್ ಎಂದಿಗೂ ಔಟ್ ಡೇಟ್ ಆಗದ ಉಡುಪಾಗಿ ರೂಪಗೊಂಡಿದೆ.  

Comments

Popular posts from this blog

Significant thoughts - from the book 'Unposted Letter'

ಕರೋನ ಪ್ರಭಾವ

Tanishq Advertisement Controversy