ಮನಸಿನಾಳದ ಮಾತುಗಳು
ನಿನ್ನನ್ನು ನಿನ್ನ ಪಾಡಿಗೆ ಇರೋಕ್ಕೆ ಬಿಟ್ಟಿದ್ದೀನಿ ಅಂದರೆ
ನಿನ್ನ ಮೇಲೆ ಪ್ರೀತಿ ಕಡಿಮೆ ಆಗಿದೆ ಅಂತಲ್ಲ
ನನ್ನ ಅತಿಯಾದ ಪ್ರೀತಿ, ನಿನಗೆ ಹಿಂಸೆ ಆಗಬಾರದು ಅಂತ.
.....
ಕಣ್ಣು ಒಪ್ಪಿದವರನ್ನು ಹೇಗೋ ಮರೆಯಬಹುದು
ಆದರೆ ಮನಸ್ಸು ಒಪ್ಪಿದವರನ್ನು ಮರೆಯಲಾಗದು
ಏಕೆಂದರೆ, ಕಣ್ಣಿಗೆ ನೂರು ಮುಖ, ಮನಸ್ಸಿಗೆ ಒಂದೇ ಮುಖ.
.....
ನಿನನ್ನು ಬಿಟ್ಟು ಬದುಕೋದು ಕಷ್ಟ ಅಂತಲ್ಲ
ನಿನ್ನನ್ನು ಬಿಟ್ಟು ಯಾರು ಸಿಗಲ್ಲ ಅಂತಲ್ಲ
ಸಿಗೋ ಯಾರು ನೀನಾಗಿರಲ್ಲ.
.....
ಒಬ್ಭ ವ್ಯಕ್ತಿಯ ಗುಣಗಳು ಬದಲಾಗಬಹುದು
ಒಬ್ಭ ವ್ಯಕ್ತಿಯ ಆಲೋಚನೆಗಳು ಬದಲಾಗಬಹುದು
ಆದರೆ ಜೊತೆ ಕಳೆದ ನೆನಪುಗಳು ಯಾವತ್ತೂ ಬದಲಾಗವು.
.....
ನೋವಾದರೆ ಮನಸ್ಸಿನಲ್ಲಿ ಇರೋರಿಗೆ ಹೇಳಬಹುದು
ಆದರೆ ಮನಸಿನ್ನಲ್ಲಿ ಇರೋರೆ ನೋವು ಮಾಡಿದರೆ
ಈ ಮನಸ್ಸಿನ ನೋವು ಯಾರಿಗೆ ಹೇಳೋದು.
.....
ಇಷ್ಟವಾದವರಿಗಾಗಿ ಕಾಯೋದ್ರಲ್ಲಿ
ಅವರ ಬಗ್ಗೆ ಚಿಂತೆ ಮಾಡೋದ್ರಲ್ಲಿ
ಒಂಥರದ ಸಂಭ್ರಮವಿರುತ್ತದೆ.
.....

Comments
Post a Comment