ಸ್ಮಾರ್ಟ್ ಫೋನ್ ಗಳಪ್ಪ ಸ್ಮಾರ್ಟ್ ಫೋನ್ ಗಳು!

ಭಾನುವಾರ ಏಳುತ್ತಿದಂತೆ ನನ್ನ ಕಯ್ ಹೋಗಿದ್ದು ಹಾಸಿಗೆಯ ಪಕ್ಕದಲ್ಲಿದ್ದ ಮೊಬೈಲ್ ಫೋನಿನ ಮೇಲೆ. ವಾಟ್ಸ್ಆಪ್ ಇನ್ಬಾಕ್ಸ್ ಗೆ ಹೋಗಿ ಬಂದ ಮೆಸೇಜ್ ಗಳನ್ನು ಓದಿದ ನಂತರ, ಫೇಸ್ಬುಕ್ ನಲ್ಲಿ ಪೋಸ್ಟ್ ಗಳನ್ನೂ ಲೈಕ್ ಮಾಡುತ್ತ ಹಾಸಿಗೆಯಿಂದ ಎದ್ದೆ. ಹಿಂದೆಯ ದಿನ ಮಡಿದ ಆನ್ಲೈನ್ ಶಾಪಿಂಗ್ ನೆನಪಾಯಿತು. ಸುಮ್ನೆ ಕೂತಿದ್ರೆ ಕಯ್ ಕೇರಿಯತೊಡಗಿತು. ಏನಾದರೊಂದು ಬ್ರೌಸ್ ಮಾಡೋಣ ಅಥವಾ  ಯುಟ್ಯೂಬ್ ನೋಡಣ ಅನುಸ್ತು. ಮೊಬೈಲ್ ಬಳಿ ಇಲ್ಲದಿದ್ರೆ ಎನ್ನನೊ ಕಳೆದುಕೊಂಡ ಆಭಾಸ. ಏನಿದು ನನ್ನ ಮೊಬೈಲ್ ಅಡಿಕ್ಷನ್ ಅನ್ಕೊಂಡೆ. 

ಎಲ್ಲರು ನನ್ನ ಹಾಗೆ ಇರಬಹುದಾ? ಅಂತ ಅನ್ಕೊಂಡು ನನ್ನ ಗಂಡನ ಜೊತೆ ಮೊಬೈಲ್ ಅಡಿಕ್ಷನ್ ಬಗ್ಗೆ ಮಾತಾಡ್ದೆ. 

ಕೆಲವೊಮ್ಮೆ ಅನ್ಸುತ್ತೆ, ಸ್ಮಾರ್ಟ್ ಫೋನ್ ಗಳು ಬರೋ ಮುಂಚೆ ನಾವು ಹೇಗೆ ಇರ್ತಿದ್ವಿ ಅಂತ. ಲೆಟರ್ಸ್ ಗಳಿಗೆ ಪೋಸ್ಟ್ ಬಾಕ್ಸ್ ಚೆಕ್ ಮಾಡ್ತಿದ್ವಿ. ಫೋನ್ ಕಾಲ್ಸ್ ಗೆ ಲ್ಯಾಂಡ್ಲೈನ್ ಹತ್ರ ಕಾಯ್ತಿದ್ವಿ. ಸ್ನೇಹಿತರು, ಸಂಬಂಧಿಕರು ಸಿಕ್ಕಾಗ ಕೂತು ಕಣ್ಣಲ್ಲಿ ಕಣ್ಣಿಟ್ಟು ಮಾತಾಡ್ತಿದ್ವಿ. ಯಾವುದಾದರು ಹೊಸ ಜಾಗಕ್ಕೆ ಹೋಗಬೇಕಾದರೆ ಅಡ್ದ್ರೆಸ್ ಅನ್ನು ಕೇಳಿ ತಿಳಿದುಕೊಳ್ತಿದ್ವಿ. ಟೆಲಿಫೋನ್ ಡೈರೆಕ್ಟ್ರಿಗಳು ಇರ್ತಿತ್ತು. ಆಲ್ಬಮ್ ಗಳು ಇರ್ತಿತ್ತು. ಫೋನ್ ನಂಬರ್ ಗಳು, ಹುಟ್ಟುಹಬ್ಬಗಳು, ಅನಿವರ್ಸರಿ ಗಳು ನೆನಪಿರ್ತಿತ್ತು. ಕ್ಯಾಂಡಲ್, ಮ್ಯಾಚ್ ಬಾಕ್ಸ್ ಎಲ್ಲಿದೆ ಎಂದು ತಿಳಿದಿರ್ತಿತ್ತು. ಔಟ್ ಡೋರ್ ಆಟಗಳು ಏನೆಂದು ತಿಳಿದಿತ್ತು. 

ಈಗ ಮೊಬೈಲ್ ನಲ್ಲಿ ಬ್ಯಾಲೆನ್ಸ್ ಎಷ್ಟಿದೆ, Wi -Fi  ಇದೆಯೋ ಇಲ್ಲವೋ, ಫೋನ್ ನ ಬ್ಯಾಟ್ರಿ ಸಾಕಷ್ಟು ಇದೆಯೋ ಅನ್ನೋದೆ ಚಿಂತೆ. 

ಸರಳವಾದ ಜೀವನ ನಡೆಸೋದಕ್ಕೆ ಸ್ಮಾರ್ಟ್ ಫೋನ್ ಗಳು ಬಹಳಷ್ಟು ಸಹಾಯ ಮಾಡಿವೆ. ಶಾಪಿಂಗ್ ನಿಂದ ಹಿಡಿದು ಬ್ಯಾಂಕಿಂಗ್ ನ ವರೆಗೂ ಎಲ್ಲವನ್ನು ಸುಲಭವಾಗಿ ಮಾಡಬಹುದಾಗಿದೆ. ಆದರೂ ಹೆಚ್ಚಾಗುತ್ತಿರುವ ಅತಿಯಾದ ಅವಲಂಬನೆ ನಮ್ಮನ್ನು ಟೆಕ್ನಾಲಜಿಯ ಗುಲಾಮರನ್ನಾಗಿ ಮಾಡುತ್ತಿದೆ ಅನ್ನುವುದರಲ್ಲಿ ಸಂದೇಹವಿಲ್ಲ. ಟೆಕ್ನಾಲಜಿ ಬಲ ಆಗೋ ಬದಲು ಈಗ ದುರ್ಬಲ ಆಗಿದೆ. ಎಷ್ಟರಮಟ್ಟಿಗೆ ಅಂದರೆ ಇದು ನಮ್ಮ ಸಾಮಾಜಿಕ ಸಂವಹನ ಮತ್ತು ನಡವಳಿಕೆಗಳ ಮೇಲೆ ಪರಿಣಾಮವನ್ನು ಬೀರಲಾರಂಭಿಸಿದೆ. 

Related image

ನಾವು ಹೋಟೆಲ್ ಗಳಿಗೆ ಹೋದಾಗ, ಒಂದೇ ಟೇಬಲ್ ನಲ್ಲಿ ಕುಳಿತ್ತಿದ್ರೂ ಮಾತಾಡ್ತಿರಲ್ಲ. ಫೋನ್ ನಿನಲ್ಲಿ ಮಗ್ನರಾಗಿರುತ್ತೀವಿ. ವೇಟರ್ ಆರ್ಡರ್ ತೆಗೆದುಕ್ಕೊಳ್ಳಲು ಬಂದ್ರು ಗಮನಿಸದೆ, ಊಟ ಬಂದರು ಅದನ್ನ ತಿನ್ನದೇ ಮೆಸೇಜುಗಳಲ್ಲಿ ಬಿಜಿಯಾಗಿರುತ್ತೆವೆ. ಊಟ ಬಂದುದ್ದನ್ನು ಗಮನಿಸಿದರು, ಮೊದಲು 
ಅದರ ಫೋಟೋ ತೆಗೆದು, ಅಪ್ಲೋಡ್ ಮಾಡಿ ನಂತರ ತಿನ್ನತೊಡಗುತ್ತೇವೆ. ಕೇಳೋದು ಮರಿತೆ, ಹೋಟೆಲ್ ನಲ್ಲಿ ಕಾಲಿಡುತ್ತಿದ್ದಂತೆ ಫ್ರೀ Wi -Fi  ಇದಿಯೋ ಇಲ್ಲವೋ ಅಂತ ಚೆಕ್ ಮಾಡೋದಿಲ್ವೆ ನಾವೆಲ್ರು?

ಸ್ಮಾರ್ಟ್ ಫೋನ್ ಗಳನ್ನು ಉಪಯೋಗಿಸುವ ಜನ್ರ ಸಂಖ್ಯೆ ಏರುತ್ತಿದಂತೆ, ಅದಕ್ಕೆ ಅಡಿಕ್ಟ್ ಆಗುವ ಜನ್ರ ಸಂಖ್ಯೆಯು ಏರುತ್ತಿದೆ; ಮುಖ್ಯವಾಗಿ ಯುವಜನ್ರಲ್ಲಿ. ಇತ್ತೀಚೆಗೆ ಓದಿದ ಒಂದು ಲೇಖನದಲ್ಲಿ ಸ್ಮಾರ್ಟ್ ಫೋನ್ ಅಡ್ಡಿಕ್ಷನ್ ಅನ್ನು ಆಲ್ಕೋಹಾಲ್ ಮತ್ತು ಡ್ರಗ್ ಅಡ್ಡಿಕ್ಷನ್ ಗಳಿಗೆ ಹೋಲಿಸಲಾಗಿತ್ತು. ಅದರ ಪ್ರಕಾರ, ಈ ಎರಡು ಅಡ್ಡಿಕ್ಷನ್ ಗಳು ಒಂದೇ ತರಹ ಕೆಲಸ ಮಾಡ್ತವೆ. ಸ್ಮಾರ್ಟ್ ಫೋನ್ ಅಡಿಕ್ಟ್ ಗಳು ಉತ್ತಮ ಅನುಭವವನ್ನು ಪಡೆಯಲು ಸ್ಮಾರ್ಟ್ ಫೋನ್ ನನ್ನ ಉಪಯೋಗಿಸ್ತಾರೆ. ಇವರ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತೆ. ಇವರುಗಳಿಗೆ ಸ್ಮಾರ್ಟ್ ಫೋನ್ ಗಳು ಲಭ್ಯ ವಿರದಿರದ ಸಮಯದಲ್ಲಿ, ಆತಂಕದ ಸಮಸ್ಯೆಗಳು ಕಾಣಿಸಿಕೊಳ್ಳುವ ಅವಕಾಶಗಳು ಇರ್ತವೆ. 

ಇದರ ಬಗ್ಗೆ ಪ್ರತಿಯೊಬ್ರು ಗಂಭೀರವಾಗಿ ಯೋಚಿಸಲು ಪ್ರಾರಂಭಿಸಬೇಕು. ಸ್ಮಾರ್ಟ್ ಫೋನ್ ಗಳಿಂದ ಆಗುವ ಸಮಸ್ಯೆ ಗಳು ಕಯ್ ಮೀರಿಹೋಗುವ ಮುನ್ನವೇ ಅವುಗಳನ್ನು ತಡೆಗಟ್ಟಬೇಕು. ಸ್ಮಾರ್ಟ್ ಫೋನ್ ಗಳು ಜೀವನವನ್ನು ಸುಲಭವಾಗಿಸ್ತವೆ, ಆದರೆ ಇವುಗಳಿಂದ ಹೊರಗೊಂದು ಜೀವನ ಇದೆಯೆಂದು ನಾವು ಎಂದು ಮರೆಯಬಾರದು. 

Comments

Popular posts from this blog

Significant thoughts - from the book 'Unposted Letter'

ಕರೋನ ಪ್ರಭಾವ

Tanishq Advertisement Controversy