ಜವಾಬ್ದಾರಿ ತೆಗೆದುಕೊಳ್ಳುವ ಸಮಯ ಬಂದಿದೆ...


ಈ ನಡುವೆ ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲೆಡೆ ಕೇಳಿಬರಲು ಆರಂಭಿಸಿದೆ. ವನಮಹೋತ್ಸವ, ಪರಿಸರ ದಿನಾಚರಣೆ ಎಂಬ ಹೆಸರಿನಲ್ಲಿ ಎಲ್ಲೆಡೆ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೆಲವು ದಿನಗಳ ತೀವ್ರ ಸದ್ದಿನ ನಂತರ ಯಾವ ಸಂಭಂದವೇ ಇಲ್ಲದಂತೆ ಮರೆಯಾಗಿಬಿಡುತ್ತದೆ. ಮತ್ತೆ ಮುಂದಿನ ವರ್ಷ ಪರಿಸರ ದಿನ ಎದುರಾದಾಗಲೇ ಪರಿಸರ ಸಂರಕ್ಷಣೆಯ ಬಗ್ಗೆ ನೆನೆಪಾಗುವುದು.

ವರ್ಷದಲ್ಲಿ ಬರೀ ಒಂದೆರಡು ದಿನ ನೆನಪಿಸಿಕೊಂಡು ವಿಚಾರಿಸುವ ವಿಷಯವೇ ಇದು? ಕೇವಲ ಪರಿಸರದಿನದಂದು ಜವಾಬ್ದಾರಿಯನ್ನು ತೆಗೆದುಕೊಂಡಂತೆ ತೋರಿಸಿ ವರ್ಷವಿಡೀ ಮರೆತುಬಿಡುವುದೇ? ಪರಿಸರ ಸಂರಕ್ಷಣೆ ಒಂದೂ ಎರಡೂ ದಿನಗಲ್ಲಿ ಮಾಡಿಮುಗಿಸಲಾಗುವಂಥಹ ಕೆಲಸವಲ್ಲ. ಪ್ರತಿದಿನ ಆಚರಿಸುವಂತಹ ಕರ್ತವ್ಯ. ಮೊದಲು ಇದರ ಬಗ್ಗೆ ಅರಿಯಬೇಕು ಹಾಗು ಸದಾ ಪಾಲಿಸಬೇಕು.

ನಿಜಕ್ಕೂ ಈ ಪರಿಸರ ಎಷ್ಟು ಸುಂದರವಾಗಿದೆಯಲ್ಲವೇ? ಸಮುದ್ರ ತೀರದಲ್ಲೋ ಅಥವಾ ಹಸಿರು ಮರಗಳ ನಡುವೆ ಕುಳಿತಿಕೊಂಡಾಗ ನಮ್ಮ ಮನಸ್ಸಿನಲ್ಲಿ ಶಾಂತಿಯ, ಪ್ರೀತಿ, ಹುಮ್ಮಸಿನ ಭಾವನೆಗಳು ಆವರಿಸಿಕೊಳ್ಳುತ್ತದೆ. ಆದರೆ ಈನಡುವೆ ನಾವುಗಳು ತಂತ್ರಜ್ಞಾನದ ಗಾಲಿಗೆ ಸಿಕ್ಕಿ, ಪ್ರಕೃತಿಯೊಡಗಿನ ಬಾಂಧವ್ಯ ಕಡಿಮೆ ಮಾಡಿಕೊಳ್ಳುತ್ತಿದ್ದೇವೆ.

Image result for responsibility

ತಂತ್ರಜ್ಞಾನದ ಹಾದಿಯಲ್ಲಿ ಸಾಗುತ್ತ ನಮ್ಮ ಸುತ್ತಲಿನ ಚಿಕ್ಕ ಚಿಕ್ಕ ಸಂಗತಿಗಳನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದೇವೆ. ಪರಿಸರದ ಬಗ್ಗೆಯೇ ಗೊತ್ತಿಲ್ಲವಾದರೆ ಇನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತುದ್ದೇವೆ. ನಮ್ಮ ಜೀವನ ಯಾಂತ್ರಿಕತೆ ಒಂದರಲ್ಲೇ ಹೂತಿಕೊಂಡಿದೆ, ಹೂತಿಕೊಳ್ಳುತ್ತಿದೆ. ನಮ್ಮ ಪರಿಸರ ಅಂದುಕೊಳ್ಳುವದನ್ನು ಬಿಟ್ಟು ಯಾರದ್ದೋ ಪರಿಸರ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ.

ನಮ್ಮನ್ನು ನಾವು ಇನ್ನಷ್ಟು ಅರ್ಥಮಾಡಿಕೊಂಡು ಜೀವನದಲ್ಲಿ ಸಾರ್ಥಕತೆ ತೃಪ್ತಿ ಕಾಣಲಾದರೂ ಪರಿಸರದ ಬಗ್ಗೆ ತಿಳಿದುಕೊಳ್ಳಲೇಬೇಕು. ಆದರೆ ಇದನ್ನು ಆಸ್ವಾದಿಸಲು ನಮಗೆ ಸಮಯವೆಲ್ಲಿದೆ ಹೇಳಿ? ಸಮಯ ಸಿಕ್ಕರೆ ಸಾಕಯ ಮಾಲ್, ಚಿತ್ರ ಮಂದಿರ ಮತ್ತಿನ್ಯಾವುದೋ ಜಾಗ ಅಂಥ ಅಲೆಯುತ್ತೇವೆ, ಪ್ರವಾಸಿ ತಾಣಕ್ಕೆ ಭೇಟಿ ನೀಡಿ ಅಲ್ಲಿನ ಕಸ ಕಂಡು ನಾವು ತೆಗೆದುಕೊಂಡು ಹೋಗಿದ್ದ ಎರಡು ಖಾಲಿ ನೀರಿನ ಬಾಟಲಿ ಒಗೆದು 'ಎಷ್ಟು ಗಲೀಜಾಗಿದೆ' ಎನ್ನುತ್ತಾ ಸರ್ಕಾರವನ್ನು ದೂರಲು ಮರೆಯುವುದಿಲ್ಲ.

Comments

Popular posts from this blog

Significant thoughts - from the book 'Unposted Letter'

ಕರೋನ ಪ್ರಭಾವ

Tanishq Advertisement Controversy