ನೆನಪುಗಳು


ನೆನಪುಗಳು ಇರುವುದು ನಮಗೆ  
ನಡೆದುಹೋದ ಘಟನೆಗಳನ್ನು ಜ್ಞಾಪಿಸಲು,
ನಮ್ಮ ಜೀವನದಲ್ಲಿ ಇದ್ದ ವಿಶೇಷ ಸ್ನೇಹಿತರನ್ನು 
ನಾವು ಹಚ್ಚಿಕೊಂಡಿಂದ್ದ ನಮ್ಮ ಆತ್ಮೀಯರನ್ನು 
ನಾವು ಎಂದಿಗೂ ನೋಡಲಾಗದ ಪ್ರೀತಿಪಾತ್ರರನ್ನು 

ನೆನಪುಗಳು ಇರುವುದು ನಮಗೆ 
ಇತರರೊಂದಿಗೆ ಹಂಚಿಕೊಳ್ಳಲು, 
ನಾವು ಪ್ರೀತಿಸುವ ಜನರೊಂದಿಗೆ 
ನಮ್ಮ ಮೇಲೆ ಕಾಳಜಿ ಇರುವವರೊಂದಿಗೆ 
ನಮ್ಮ ಸುಖ ದುಖ್ಖಗಳನ್ನು ಹಂಚಿಕೊಳ್ಳುವವರಿಗೆ 

ನೆನಪುಗಳು ಇರುವುದು ನಮಗೆ
ಯಾವುದು ಶಾಶ್ವತವಲ್ಲ ಎಂದು ಹೇಳಿಕೊಡಲು, 
ಇಂದು ಸಂತೋಷ ನಾಳೆ ದುಃಖ ಇರುವುದು 
ಸಮಯ ಅಮೂಲ್ಯವಾದುದು 
ಏನೆ ಆಗಲಿ ಜೀವನವನ್ನು ಆನಂದಿಸೆಂದು.

Comments

Popular posts from this blog

Significant thoughts - from the book 'Unposted Letter'

ಕರೋನ ಪ್ರಭಾವ

Tanishq Advertisement Controversy