ಗೋರಂಟಿ......ಅಂದಕ್ಕು, ಆರೊಗ್ಯಕ್ಕು!
ಅಂಗೈಗೆ ಹಚ್ಚಿಕೊಳ್ಳುವ ಗೋರಂಟಿ (ಹೆನ್ನಾ) ಸಾಂಪ್ರದಾಯಿಕತೆಯ ಸಂಕೇತವಾದರೂ, ಇದೀಗ ಫ್ಯಾಶನ್ ಕೂಡ ಆಗಿದೆ. ಮದುವೆ ಹೆಣ್ಣಿಗೆ ಗೋರಂಟಿ ಬೇಕೇ ಬೇಕು. ಈಗ ಹಬ್ಬ ಹರಿದಿನಗಳಿಗೂ ಗೋರಂಟಿ ಹಚ್ಚಿಕೊಳ್ಳುವುದಿದೆ. ಸಣ್ಣ ಹುಡಿಗಿಯರಿಂದ ಹಿಡಿದು ಮಹಿಳೆಯರವರೆಗೂ ಎಲ್ಲರೂ ಗೋರಂಟಿ ಹಚ್ಚಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ಗೋರಂಟಿ ಎಲೆಗಳನ್ನು ಬಳಸಿ ವಿವಿಧ ವಿನ್ಯಾಸಗಳನ್ನು ಅಂಗೈ ಮೇಲೆ ಹಚ್ಚಿಕೊಳ್ಳುವುದು ಹಿಂದಿನಿಂದ ಬೆಳೆದು ಬಂದ ಪದ್ಧತಿ.
ಗೋರಂಟಿ ಗಿಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮುಲತಃ ಉತ್ತರ ಆಫ್ರಿಕಾ ಹಾಗು ಏಷ್ಯಾಗೆ ಸೇರಿದ ಇದನ್ನು, ಸಾಮಾನ್ಯವಾಗಿ ಅಲಂಕಾರಕ್ಕಾಗಿ ಹಾಗೂ ಬಣ್ಣಕಾಗಿ ಹೆಚ್ಚು ಉಪಯೋಗಿಸುತ್ತಾರೆ. ಹೆಣ್ಣು ಮಕ್ಕಳು ಕೈ ಕಾಲುಗಳ ಅಲಂಕಾರರಕ್ಕಾಗಿ ವಿಶೇಷ ಸಂದರ್ಭಗಳಲ್ಲಿ ಉಪಯೋಗಿಸಿದರೆ, ವಯ್ಯಸ್ಸಾದವರು ಬಿಳಿಯ ತಲೆಗೂದಲನ್ನು ಕಪ್ಪಾಗಿಸಲು ತಲೆಗೆ ಹಚ್ಚಿಕೊಳ್ಳುತ್ತಾರೆ. ರೇಷ್ಮೆ ಹಾಗೂ ಉಣ್ಣೆ ಬಟ್ಟೆಗಳಿಗೆ ಬಣ್ಣ ಕೊಡಲು ಗೋರಂಟಿ ಗಿಡದ ಎಲೆಯನ್ನು ಉಪಯೋಡಿಸುವುದುಂಟು.

ಇದೀಗ ಕೋನ್ ಗೋರಂಟಿ ಮಹಿಳೆಯರಲ್ಲಿ ಹೆಚ್ಚು ಜನಪ್ರಿಯ. ಮದುವೆ ಸಮಾರಂಭ ಮಾತ್ರವಲ್ಲದೆ, ಮಾಮೂಲಿ ದಿನಗಳಲ್ಲೂ ಗೋರಂಟಿ ಹಾಕಿಕೊಳ್ಳುವುದು ಟ್ರೆಂಡ್ ಆಗಿದೆ. ಗೋರಂಟಿ ಮದುವೆ ಹೆಣ್ಣಿಗೆ ಬೇಕಾದ ಮುಖ್ಯ ವಸ್ತುಗಳಲ್ಲಿ ಒಂದು. ಹೆಣ್ಣು ಮಕ್ಕಳ ಮನಸ್ಸನ್ನು ಗೆದ್ದಿರುವ ಗೋರಂಟಿ ಗಿಡ, ಅಲಂಕಾರಕ್ಕೆ ಮಾತ್ರವಲ್ಲದೇ ಆರೋಗ್ಯಕ್ಕೂ ಪ್ರಯೋಜನಕಾರಿ. ಸಾಮಾನ್ಯವಾಗಿ ಪೊದೆ ರೀತಿ ಬೆಳೆಯುವ ಸಸ್ಯ ಇದಾಗಿದ್ದು, ಇದರ ಏಲೆಗಳಿಂದ ಪದಾರ್ಥಗಳನ್ನುತಯಾರಿಸಲಾಗುತ್ತದೆ. ಇದರ ಹೂವಿನಿಂದ ಪರಿಮಳಯುಕ್ತ ತೈಲವನ್ನು ಮಾಡಲಾಗುತ್ತದೆ.
ಗೋರಂಟಿ ತಂಪು ಉಂಟು ಮಾಡುವ ಒಂದು ಸಾಧನ. ದೇಹದಲ್ಲಿ ಹೆಚ್ಚಿನ ಉಷ್ಣತೆ ಇದ್ದರೆ ಅದನ್ನು ಗೋರಂಟಿ ತೆಗೆದು ಹಾಕುತ್ತದೆ. ಇದರ ತಂಪು ಗುಣದಿಂದ ತಲೆ ನೋವಿನ ನಿವಾರಣೆಗೆ ಉತ್ತಮ ಔಷದಿಯು ಹೌದು. ಗೋರಂಟಿ ತಲೆಗೂದಲ ಸಮಸ್ಯೆಗೂ ಸೂಕ್ತ ಪರಿಹಾರ ಕೊಡುತ್ತದೆ. ತೆಲೆ ಹೊಟ್ಟನ್ನು ನಿವಾರಿಸುತ್ತದೆ ಹಾಗೂ ಕೂದಲು ನಯವಾಗಿ, ಹೊಳಪು ಬರಲೂ ಇದು ನೆರವಾಗುತ್ತದೆ. ಇಂದರ ಹೇರ್ ಪ್ಯಾಕ್ ಕೂದಲ ಹಾರೈಕೆಗೆ ಸಹಕಾರಿ.
ಸೌಂದರ್ಯಕ್ಕೂ, ಆರೋಗ್ಯಕ್ಕೂ ಬಹಳ ಉಪಯುಕ್ತವಾದ ಗೋರಂಟಿ ಗಿಡ ಸಂಪ್ರದಾಯಕ್ಕೂ ಬೇಕು, ಅಂದ ಚಂದದ ನಿರ್ವಹಣೆಗು ಬಹಳ ಸಹಕಾರಿ. ಬಹೂಪಯೋಗಿ ಗೋರಂಟಿ ಗಿಡವನ್ನು ಮನೆಯ ಅಂಗಳದಲ್ಲಿ ಹೆಚ್ಚಿನ ಉಪಚಾರವಿಲ್ಲದೆ ಬೆಳೆಸಿಕೊಳ್ಳಬಹುದು. ಇದರಿಂದ ಸೌಂದರ್ಯ, ಆರೋಗ್ಯ ಎರಡನ್ನೂ ಕಾಪಾಡಿಕೊಳ್ಳಬಹುದು.
Comments
Post a Comment